[et_pb_section fb_built=”1″ theme_builder_area=”post_content” _builder_version=”4.19.1″ _module_preset=”default”][et_pb_row _builder_version=”4.19.1″ _module_preset=”default” column_structure=”2_3,1_3″ theme_builder_area=”post_content” custom_margin=”|47px||25px||” custom_padding=”|0px||||” min_height=”784.3px” hover_enabled=”0″ sticky_enabled=”0″][et_pb_column _builder_version=”4.19.1″ _module_preset=”default” type=”2_3″ theme_builder_area=”post_content”][et_pb_text _builder_version=”4.19.1″ _module_preset=”default” theme_builder_area=”post_content” text_font=”Baloo Tamma 2|600|||||||” header_font=”Baloo Tamma 2|700|||||||” header_text_color=”#0C71C3″ hover_enabled=”0″ sticky_enabled=”0″]
ನವೆಂಬರ್ 29
ಭಾರತದ ಮಹಾನ್ ಉದ್ಯಮಿ ಭಾರತರತ್ನ ಜಹಾಂಗೀರ್ ರತನ್ ಜಿ ದಾದಾಭಾಯಿ ಟಾಟಾ (ಜೆ.ಆರ್.ಡಿ. ಟಾಟಾ) ಅವರ ಸಂಸ್ಮರಣಾ ದಿನ
-
ಜೆ ಆರ್ ಡಿ ಟಾಟಾ 1904ರ ಜುಲೈ 29ರಂದು ಜನಿಸಿದರು. ಜೆ.ಆರ್.ಡಿ. ಟಾಟಾರವರು, ಆರ್.ಡಿ ಟಾಟಾರವರ ಪುತ್ರರು.
-
ಟಾಟಾ ಸಂಸ್ಥೆಯನ್ನು 53 ವರ್ಷಗಳ ಕಾಲ ನಿರ್ವಹಿಸಿ ಮಾರ್ಗದರ್ಶನ ನಿಡಿದ ಕೀರ್ತಿ ಇವರದಾಗಿದೆ.
-
ಫ್ರಾನ್ಸ್, ಜಪಾನ್ ಮತ್ತು ಭಾರತದಲ್ಲಿ ವಿದ್ಯಾಭ್ಯಾಸ. 1925ರ ವರ್ಷದಲ್ಲಿ ಮುಂಬೈನಲ್ಲಿ ‘ಟಾಟಾ ಸನ್ಸ್ ಕಂಪೆನಿ’ಯ ಅಪ್ರೆಂಟಿಸ್ ಆಗಿ ಸೇರ್ಪಡೆ.
-
ಜೆ.ಆರ್.ಡಿ. ಅವರು ಅಧಿಕಾರ ಕೈಗೆತ್ತಿಕೊಂಡಾಗ 1939ರಲ್ಲಿ ಟಾಟಾ ಸಂಸ್ಥೆಯ ಒಟ್ಟು ಆಸ್ತಿಯ ಮೊತ್ತ 62 ಕೋಟಿ ಅಥವಾ 620 ಮಿಲಿಯ ರುಪಾಯಿಗಳು. 1960ರಲ್ಲಿ ಅದು 100 ಬಿಲಿಯನ್. 14 ಕಂಪೆನಿಗಳಿಂದ ಮಾರಾಟ 2.8 ಬಿಲಿಯನ್. 1993 ರಲ್ಲಿ ಅದರ ವಹಿವಾಟು 150 ಬಿಲಿಯನ್ ಆಗಿತ್ತು. ಈ ಅವಧಿಯಲ್ಲಿ ಜೆ.ಆರ್.ಡಿ. ಅವರು ಉಕ್ಕಿನಿಂದ ಪ್ರಾರಂಭಿಸಿ, ವಿದ್ಯುತ್ ಶಕ್ತಿ, ಮೊಟಾರ್ ಕಾರು, ಬೃಹತ್ ವಾಹನಗಳು, ಸಿಮೆಂಟ್, ರಸಾಯನಿಕ ವಸ್ತುಗಳು, ವಸ್ತ್ರೋದ್ಯಮ, ಪೇಪರ್, ಮಾಹಿತಿ ತಂತ್ರಜ್ಞಾನ, ಕೈಗಡಿಯಾರ; ದಿನನಿತ್ಯದ ಬಳಕೆ ಉಪ್ಪು, ಸಾಬೂನ್, ಶ್ಯಾಂಪೂ, ಟೀ, ಕಾಫೀ, ಹೆಂಗೆಳೆಯರ ಸೌಂದರ್ಯವರ್ಧಕ ಪರಿಕರಗಳು ಸೇರಿ ನಾನಾ ಕ್ಷೇತ್ರಗಳಲ್ಲಿ ಟಾಟಾ ಸಂಸ್ಥೆ ಹೆಜ್ಜೆಗುರುತು ಮೂಡಿಸುವಂತೆ ಮಾಡಿದರು.
-
ಅಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತಾದ ಶೈಕ್ಷಣಿಕ ಪದ್ಧತಿಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆ ಪ್ರೋತ್ಸಾಹಗಳು ಅದ್ವಿತೀಯವಾಗಿದ್ದವು.
-
ಟಾಟಾ ಅವರು ಭಾರತದ ಆರ್ಥಿಕತೆ, ಸಮಾಜಕ್ಕೆ ನೀಡಿದ ಅಮೂಲ್ಯ ಕೊಡುಗೆ ಗಮನಿಸಿ ಜೆ ಆರ್ ಡಿ ಅವರಿಗೆ ಭಾರತ ರತ್ನ(1992) ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಗೌರವಗಳು ಸಂದವು.
-
1993ರಲ್ಲಿ ಜಿನಿವಾ ನಗರಕ್ಕೆ ಹವಾ ಬದಲಾವಣೆಗೆಂದು ತೆರಳಿದ್ದ ಜೆ ಆರ್ ಡಿ ಅವರು ಅಲ್ಲಿಯೇ ನವೆಂಬರ್ ತಿಂಗಳ 29ರಂದು ನಿಧನರಾದರು.
[/et_pb_text][/et_pb_column][et_pb_column _builder_version=”4.19.1″ _module_preset=”default” type=”1_3″ theme_builder_area=”post_content”][et_pb_image src=”https://aravindindia.com/wp-content/uploads/2022/11/jrdtata_lead_image_desktop_1920x1080-1024×576.jpg” _builder_version=”4.19.1″ _module_preset=”default” theme_builder_area=”post_content” title_text=”jrdtata_lead_image_desktop_1920x1080″ hover_enabled=”0″ sticky_enabled=”0″][/et_pb_image][/et_pb_column][/et_pb_row][/et_pb_section]